Skip to main content

Posts

Showing posts from January, 2024

ಏನೆಂದು ನಾ ಹೇಳಲಿ

ರಾತ್ರಿ ನಾನು ಇದನ್ನು ಬರೆಯಲು ಆರಂಭಿಸಿದಾಗ ಸಮಯ ಸರಿಯಾಗಿ 12: 24 ಊರಲ್ಲಿ ದೊಡ್ಡ ಕಾರ್ಯಕ್ರಮ, ಊರಿನ ಯಾವ ಮನೆಯಲ್ಲೂ ಜನ ಇಲ್ಲ ಅಥವಾ ತೀರಾ ವಿರಳ ಎಂದೇ ಹೇಳಬಹುದು. ಹೀಗಿರುವಾಗ ದಿನಾಂಕ 28 ಜನವರಿ 2024 ಬಿಗ್​ ಬಾಸ್​ ಫೈನಲ್ ಇತ್ತು, ಮೈತ್ರಿ ಕಲಾ ಬಳಗದಲ್ಲಿ ರಜತ ಮಹೋತ್ಸವ ಇತ್ತು. ನನಗೆ ಎರಡೂ ಮುಖ್ಯ ಒಂದು ಸ್ವಾಮಿ ಕಾರ್ಯ (ಆಫಿಸ್​ ವರ್ಕ್​ ಇದೆ) ಇನ್ನೊಂದು ಸ್ವಕಾರ್ಯ (ತಮ್ಮನ ಸಿಂಹ ನೃತ್ಯ ಇದೆ) ನನಗೂ 25 ವರ್ಷ ಕಲಾ ಬಳಗಕ್ಕೂ ಇಪ್ಪತ್ತೈದು ವರ್ಷ ಆ ಕಾರಣ ನಮ್ಮ ಮನೆಯಲ್ಲಿ ಅಲ್ಲಿ ನಡೆಯೋ ಕಾರ್ಯಕ್ರಮ ನೋಡಲು ಎಲ್ಲರೂ ಹೋಗಿದ್ದಾರೆ. ನನಗೆ ಸುದ್ದಿ ಮಾಡುತ್ತಾ ಇರುವಷ್ಟು ಹೊತ್ತು ಅತ್ತಿತ್ತ ಗಮನ ಇರಲಿಲ್ಲ. ಆದ್ರೆ ಈಗ ಮುಗಿದಿದೆ. ಜಗುಲಿಯಲ್ಲಿ ಏನೋ ಸದ್ದಾಗ್ತಾನೆ ಇದೆ. ಇದು ಅಜ್ಜ ಸ್ವಾಮಿ‌ ಕಾರ್ಯ ( ಇದರಲ್ಲೂ ಖುಷಿ ಇದೆ ) ಅದರಿಂದ ಗಮನವನ್ನು ಬೇರೆಕಡೆ ಕೊಂಡೊಯ್ಯಲೇ ಬೇಕು ಇಲ್ಲ ಮನೆಯವರು ಬರುವ ಮೊದಲೇ ನಾನು ಹೆದರಿ ಕಂಗಾಲಾಗಿ ಮೈ ನಡುಗುತ್ತದೆ. ಎಷ್ಟು ಸಾರಿ ಬೆಚ್ಚಿ ಬೀಳುತ್ತೇನೆ ಎಂದು ಹೇಳೋದಕ್ಕೆ ಸಾಧ್ಯ ಇಲ್ಲ. ಮೊದಲೇ ಮುಗಿದರೆ ನಾನೂ ಕಾರ್ಯಕ್ರಮ ನೋಡೋಣ ಅಂತಿದ್ದೆ. ಆದರೆ ಅದು ಸಾಧ್ಯ ಆಗಲಿಲ್ಲ. ಲೈವ್ ಇತ್ತು ಅದನ್ನು ನೋಡ್ತಾ ಕುಳಿತಿದ್ದೆ. ಅಜ್ಜ ಉಳಿಸುಕೊಂಡು ಬಂದಿದ್ದ ಕಲೆ ಮುಂದುವರೆಸುವ ಆಶಯದಿಂದ ತಮ್ಮ ಈ ವರ್ಷ ಅಂದರೆ ಅಜ್ಜ ತೀರಿಕೊಂಡ ವರ್ಷವೇ ವೇಷ ಹಾಕುತ್ತಿದ್ದಾನೆ.  ಇದ...