ಬೆಂಗಳೂರಿಗೆ ಬಂದು ಏಳು ತಿಂಗಳಾಯ್ತು ಆದರೆ ಬ್ಲಾಗ್ ಬರೆಯದೆಯೂ 7 ತಿಂಗಳಾಯ್ತು. ಆಗಾಗ ಬರಿಯಲು ಮನಸಾದರು ಸಮಯ ಸಿಗುತ್ತಿರಲಿಲ್ಲ. ಯಾರ್ಯಾರೋ ಬರೆಯಲು ಹೇಳಿದ ಕಥೆ, ಚುಟುಕು ಹಾಗೂ ಒಂದು ಪ್ರಬಂಧ ಇದ್ಯಾವುದಕ್ಕೂ ಕೈ ಹಾಕಲು ನನ್ನಿಂದ ಸಾಧ್ಯವಾಗಲಿಲ್ಲ. ಸಮಾಧಾನ ಕೊಡುವ ಕೆಲವು ವಿಷಯಗಳಿವೆ ಅವನ್ನು ಆಗಾಗ ಮಾಡದಿದ್ದರೆ ತಲೆ ಕೆಟ್ಟು ಬಿಡುತ್ತೆ. ಚಿತ್ರಬಿಡಿಸೋದು,ಅನಿಸಿದ್ದನ್ನು ಬರೆಯೋದು, ಒಳ್ಳೆ ಭಾವಗೀತೆ ಕೇಳೋದು ಇವುಗಳಲ್ಲಿ ಯಾವುದಾದರೊಂದನ್ನು ಮಾಡಲೇ ಬೇಕು. ಕೆಲಸಕ್ಕೆ ಸೇರಿದಾಗಿನಿಂದ ಸುದ್ದಿಗಳನ್ನು ನಿತ್ಯವು ಬರೆದು ಬರೆದು ಬೇಸತ್ತು ಹೋದ ಮೇಲೆ ಮತ್ತೆ ಮನೆಗೆ ಬಂದು ಏನನ್ನಾದರು ಬರೆಯಬೇಕು ಅಂತ ಅನಿಸಿದರೂ ಒತ್ತಾಯವಾಗಿ ಬರೆಯಲು ಆಗುತ್ತಿರಲಿಲ್ಲ. ಇಂದು ಅದ್ಯಾಕೋ ಬರೆಯುವ ಮನಸಾಯ್ತು. ಎಷ್ಟು ಜನ 7 ತಿಂಗಳಾದಮೇಲೂ ನನ್ನ ಬರಹವನ್ನು ಓದಬಹುದು ಎಂಬ ಕುತೂಹಲವೂ ಇತ್ತು ಅದಕ್ಕಾಗಿಯೇ ಬರೆಯುತ್ತಿದ್ದೇನೆ. ಹೀಗೆ ಸಾಯಂಕಾಲ BMTC ಬಸ್ ಹತ್ತಿ ಸೀಟು ಸಿಕ್ಕಿತು ಎನ್ನುವಷ್ಟರಲ್ಲಿ ಯಾರೋ ಒಬ್ಬರು ಬಂದು ಎಬ್ಬಿಸಿ ಭಾರದ ಲ್ಯಾಪ್ ಟಾಪ್, ಊಟದ ಡಬ್ಬಿಯನ್ನೆಲ್ಲಾ ಕಂಕುಳಲ್ಲಿ ಸಿಕ್ಕಿಸಿ ಭುಜ ನೋವಿಂದ ಬಳಲಿ ನಿಂತು ಮನೆ ಸೇರಲು ಮುಕ್ಕಾಲು ಗಂಟೆ ಬೇಕು. ಅದಾದ ನಂತರ ಸ್ನಾನ, ಅಡಿಗೆ, ನಾಳಿನ ಪಾಲಿಗೆ ಬುತ್ತಿ ಇಷ್ಟು ಮಾಡುವುದೇ ಪ್ರತಿನಿತ್ಯದ ಕಾಯಕ. ಹಗಲು ರಾತ್ರಿ, ಒಬ್ಬಂಟಿಯಾಗಿ ದಿನ ರಾತ್ರಿಯೂ ಕಿಟಕಿಯಿಂದ ಗೋಡೆ ಮೇಲೆ ಬೀಳುವ ತೆಂಗಿನ ಗರಿ...