ಆಟಿ ತುಳುನಾಡಿನ ಸಂಸ್ಕೃತಿಯ ಪರಿಚಯ ಮಾಡಿಸುವುದಕ್ಕಾಗಿ ಮತ್ತು ಹಬ್ಬದ ಆಚರಣೆ ಖುಷಿಯನ್ನು, ಊಟದ ರುಚಿಯನ್ನೂ ಅರಿಯುವುದಕ್ಕಾಗಿ ಈ ಆಟಿ ಹಬ್ಬವನ್ನು ಎಸ್.ಡಿ. ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು. ಹುಡುಗ ಹುಡುಗಿಯರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು, ಹೆಣ್ಣು ಮಕ್ಕಳೆಲ್ಲ ಸೀರೆ, ಹುಡುಗರು ಪಂಚೆ ಉಟ್ಟು ರತ್ನಮಾನಸ ಎಂಬ ವಸತಿನಿಲಯದಲ್ಲಿ ಹಾಜರಿದ್ದರು. ಕಣ್ಣಿಗಂತು ಹಬ್ಬ ಚಂದ ಚಂದದ ಬಣ್ಣ, ಬಣ್ಣದ ಲೋಕ ಅಲ್ಲಿ ಸೃಷ್ಟಿಯಾಗಿತ್ತು. ತೀರಾ ಸಾಂಪ್ರದಾಯಿಕ ಎನಿಸುವ ಹಳೆಯ ಕಾಲದ ಕಟ್ಟಡ, ಅಲ್ಲಿದ್ದ ಮರದ ವಸ್ತುಗಳು, ಹೊರಜಗುಲಿ, ಪಾಠಶಾಲೆ, ಒಳಾಂಗಣ ವಿನ್ಯಾಸ ಎಲ್ಲವೂ ಗುತ್ತು ಮನೆಯ ಶೈಲಿಯಲ್ಲಿತ್ತು. ನನಗೆ ಇದು ಹೊಸತರ ಎನಿಸಿತ್ತು. ರತ್ನಮಾನಸ ಬಾಳೆಲೆ ಊಟ ಮನೆಯ ಮೆತ್ತು ಹತ್ತಿದಂತೆ ಮೇಲ್ಗಡೆ ಮೆಟ್ಟಿಲೇರಿ ಹೋದಾಗ ಅಲ್ಲಿ ಪುಟ್ಟದೊಂದು ವೇದಿಕೆ ಸಿದ್ಧವಾಗಿತ್ತು. ಅಲ್ಲಿ ಕಹಿ ಔಷದಿಯ ಹಾಲೆ ಮರದ ಚಕ್ಕೆಯ ಕಷಾಯ ಮಾಡುವ ವಿಧಾನದ ಬಗ್ಗೆ ಮತ್ತು ಈ ಆಟಿ ಮಾಸದಲ್ಲಿ ಹೊಸ ಪೈರು ಇಲ್ಲದೆ ಹಳೆ ಪೈರುಗಳು ಸಹ ಖಾಲಿಯಾಗಿ ಮನೆಯವರು ಮಳೆಗಾಲದಲ್ಲಿ ಕಂಗಾಲಾಗುವ ದಿನದ ಕಥನವಿತ್ತು.ಅದರಲ್ಲಿ ಕುತೂಹಲಕಾರಿಯಾದ ವಿಷಯವೆಂದರೆ ಮನೆಯ ಗಂಡಸರೊಬ್ಬರು ಮರದ ಹತ್ತಿರ ಹಿಂದಿನ ದಿನ ಹೋಗಿ ನಾಳೆ ಬರುತ್ತೇನೆ ನಿನ್ನಲ್ಲಿಯ ಔಷದೀಯ ಗುಣಗಳು ಹೆಚ್ಚಿರಲಿ ಎಂದು ಬೇಡಿಕೆ ಸಲ್ಲಿಸಿ ಬರುವುದು. ಬಂದು ಮರುದಿನ ಬೆತ್ತಲಾಗಿ ಹೋಗಿ ಯಾ