ಮಳೆ ಮತ್ತು ಮ್ಯಾಗಿ ಈ ಎರಡು ಪದಗಳನ್ನು ಓದಿದ ತಕ್ಷಣ ನಿಮ್ಮೆಲ್ಲರ ಮನಸಿನಲ್ಲಿ ಒಂದು ರುಚಿಯಾದ ಕಲ್ಪನೆ ಬರುವುದಂತು ಸತ್ಯ. ಮಳೆಯಲ್ಲಿ ನೆನೆದ ತಣ್ಣಗಿನ ಮೈಗೊಂಚೂರು ಬಿಸಿ ತಾಕಿದರೆ ಸಾಕು ಅದೊಂದು ತರದ ರೋಮಾಂಚನ. ಆದರೆ ಅದೇ ಬಿಸಿ ಮ್ಯಾಗಿಯ ರೂಪದಲ್ಲಿ ಮೈಯೊಳಗಿಳಿದರೆ ಅದೊಂದು ಅನುಭೂತಿ. ಈ ಮ್ಯಾಗಿಗೆ ಸ್ಪೂರ್ತಿ ಗೆಳತಿ , ಸ್ಪೂರ್ತಿ ಎರಡೇ ನಿಮಿಷದಲ್ಲಿ ತಯಾರಿಸಬಹುದು ಎಂದು ಬರೆದಿದ್ದರೂ, ಐದು ನಿಮಿಷಗಳವರೆಗೆ ನಮ್ಮನ್ನು ಕಾಯಿಸಿ ಬೇಯುವ ಈ ಮ್ಯಾಗಿ ಎಳೆಗಳು ಅದರ ಮಸಾಲೆಯ ಪರಿಮಳ ಆಹಾ! ಮಳೆ ಬಂದಾಗ ಅಂಗಡಿಯಲ್ಲೂ ಕೊಂಡು ತಿಂದ ಮ್ಯಾಗಿ ಸುಲಭವಾಗಿ ದಕ್ಕುವ ಸರಳ ಬೆಲೆಯ ಮ್ಯಾಗಿ ಎಷ್ಟೋ ಜನರ ಪ್ರೀತಿಯ ತಿಂಡಿ. ಅದರಲ್ಲೂ ಹಾಸ್ಟೆಲ್ ಹುಡುಗಿಯರ ಸುಲಭ ಸಾಧನ ಇಸ್ತ್ರಿ ಪೆಟ್ಟಿಗೆಯಲ್ಲಿ ಬೇಕಾದರೂ ಬೇಯಿಸಿ ತಿನ್ನಬಹುದಾದ ತಿಂಡಿ ಇದು. ಹೀಗೆ ಬೇಯಿಸಿ ತಿನ್ನುವ ಕಲೆ ತಿಳಿದಿರುವುದು ಹಾಸ್ಟೆಲ್ ಅಲ್ಲಿ ಹಸಿವನ್ನು ಕಂಡವರಿಗೆ ಮಾತ್ರ ಗೊತ್ತು. ಚೀಸ್ ಮತ್ತು ಕಾರ್ನ ಮ್ಯಾಗಿ ಪದೆ ಪದೆ ಅಪ್ಪನಿಂದ ಬಯಿಸಿಕೊಳ್ಳುವ ಮ್ಯಾಗಿ ಮಳ್ಳು ಬಿಡುವುದಾದರು ಯಾವಾಗ? ಈ ಮ್ಯಾಗಿಯನ್ನೇ ಕೇಳಬೇಕು.. ನೀನು ನನ್ನ ಬಿಡುವುದು ಯಾವಾಗ ಎಂದು. ನನ್ನಂತೆ ನಿಮಗೂ ಇಷ್ಟವಿರಬಹುದು ಇದೇ ಮ್ಯಾಗಿ. ಅಜ್ಜನ ಮನೆಯ ಕಿಡಕಿಯಲ್ಲೂ ಕಾಡಿದ ಮ್ಯಾಗಿ ಸುಕಂ